ಜಾಲತಾಣ ವಿಭಾಗದ ಬಗ್ಗೆ

ಸರ್ಕಾರದ ಎಲ್ಲ ಜಾಲತಾಣಗಳನ್ನು ಏಕರೂಪದ, ವಿಕಲ ಚೇತನ ಸ್ನೇಹಿ ಮತ್ತು ಬಳಕೆದಾರ ಸ್ನೇಹಿಯಾಗಿ ರೂಪಿಸುವುದು. ಭಾರತ ಸರ್ಕಾರದ ಜಾಲತಾಣ ಮಾರ್ಗಸೂಚಿಗಳು(GIGW), ಅಕ್ಸಿಸಿಬಿಲಿಟಿ ಮಾರ್ಗಸೂಚಿಗಳು, “ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿಫಾರಸ್ಸುಗಳನ್ನು ಜಾಲತಾಣಗಳಿಗೆ ಅಳವಡಿಸಿಕೊಳ್ಳುವುದು. ಜಾಲತಾಣಗಳಿಗೆ ಮಾಹಿತಿಯನ್ನು ಅಪ್ಲೋಡ್‌ ಮಾಡುವುದು "ಮಾಹಿತಿ ನಿರ್ವಹಣಾ ವ್ಯವಸ್ಥೆ"ಯನ್ನು ಅಳವಡಿಸುವುದು. ಸರ್ಕಾರಿ ಜಾಲತಾಣಗಳನ್ನು ಸರ್ಕಾರದ ಅಡಿಯಲ್ಲಿ ಒಂದೇ ವೇದಿಕೆಯಲ್ಲಿ ಅಭಿವೃದ್ಧಿಗೊಳಿಸುವುದು ಮತ್ತು ನಿರ್ವಹಿಸುವುದು. ಸುರಕ್ಷತಾ ಮಾನದಂಡಗಳನ್ನು ಅಳವಡಿಸುವುದು. ಸಮರ್ಪಕ ಮಾಹಿತಿಯನ್ನು ಜಾಲತಾಣಗಳ ಮೂಲಕ ನೀಡುವುದು. ತಾಂತ್ರಿಕೇತರ ಸಿಬ್ಬಂದಿಯೂ ಜಾಲತಾಣ ನಿರ್ವಹಣೆ ವ್ಯವಸ್ಥೆ. ನಾಲ್ಕನೇ ಹಂತದ ಏಕರೂಪದ ಡೊಮೇನ್‌ ನೋಂದಣಿ. ಜಾಲತಾಣಕ್ಕೆ ಸಂಬಂಧಿಸಿದಂತೆ ಇಲಾಖೆಗಳಿಗೆ ಶ್ರಮ, ಸಮಯ ಮತ್ತು ಸಂಪನ್ಮೂಲವನ್ನು ಉಳಿತಾಯ ಮಾಡುವುದು.

ಯೋಜನೆ ಆರಂಭ : ಕರ್ನಾಟಕ ಜಾಲತಾಣ ಯೋಜನೆಯು 2008ರಲ್ಲಿ ಕಾರ್ಯಾರಂಭ ಮಾಡಿತು. ಪ್ರಾರಂಭದಲ್ಲಿ ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. 2009ರಿಂದ ಇ-ಆಡಳಿತ ಕೇಂದ್ರದ ವ್ಯಾಪ್ತಿಗೆ ಒಳಪಟ್ಟು ಕಾರ್ಯನಿರ್ವಹಿಸುತ್ತಿದೆ.

ಸಾಧನೆಗಳು : ಸರ್ಕಾರದ ಎಲ್ಲ ಜಾಲತಾಣಗಳಿಗೆ ಏಕರೂಪತೆ ನೀಡುವ ಪ್ರಯತ್ನವನ್ನು ಇ-ಆಡಳಿತ ಕೇಂದ್ರ ಮಾಡುತ್ತಿದೆ.

ಮಾದರಿ  ವೈಶಿಷ್ಟ್ಯಗಳು

ವಿನ್ಯಾಸದಿಂದ ಅಭಿವೃದ್ಧಿಗೆ     ಬಳಕೆಗೆ ಸಿದ್ಧ ಜಾಲತಾಣ ಮಾದರಿಗಳು

ವಿನ್ಯಾಸಗಳು

ಅದ್ಭುತ ವಿನ್ಯಾಸ, ನೋಟಕ್ಕೆ ಸುಲಭವಾಗಿ ಸ್ಪಂದನಾತ್ಮಕವಾಗಿದೆ.

ಜಿ.ಐ.ಜಿ.ಡಬ್ಲ್ಯೂ ಅನುಸರಣೆ

ಜಾಲತಾಣ ಸೃಜನೆಯಲ್ಲಿ ಕಡ್ಡಾಯವಾಗಿರುವ ಭಾರತ ಸರ್ಕಾರದ ಜಾಲತಾಣಗಳ ಮಾರ್ಗಸೂಚಿಸಗಳನ್ನು(ಜಿ.ಐ.ಜಿ.ಡಬ್ಲ್ಯೂ) ಸಂಪೂರ್ಣ ಅಳವಡಿಕೆ

ಏಕೀಕೃತ ವಾಗಿರುವ ಮುಕ್ತ ಸಂಪನ್ಮೂಲ ತಂತ್ರಜ್ಞಾನ

ಜಾಲತಾಣಗಳಿಗೆ ಸಂಪೂರ್ಣ ಪರಿಹಾರ, ಅತ್ಯಾಧುನಿಕ ಮುಕ್ತ ತಂತ್ರಜ್ಞಾನದ ಬಳಕೆ

ಹುಡುಕಿ

ಮಾಹಿತಿಯ ಸುಲಭ ಶೋಧನೆಗೆ ಏಕೀಕೃತ ವ್ಯವಸ್ಥೆ

ಸ್ಪಂದನಾತ್ಮಕ ವಿನ್ಯಾಸ

ಸ್ಮಾರ್ಟ್‌ ಫೋನ್‌, ಟ್ಯಾಬ್ಲೆಟ್ಸ್‌ ಹಾಗೂ ಎಲ್ಲ ಮಾದರಿಯ ಕಂಪ್ಯೂಟರ್‌ ಪರದೆಗಳಿಗೆ ಹೊಂದಿಕೊಳ್ಳುವ ಜಾಲತಾಣಗಳು

ಮೂಲಸೌಕರ್ಯ ಸಹಿತ

ಸಾಕಷ್ಟು ‍ಸ್ಥಳಾವಕಾಶ, ಸಂಪರ್ಕ ಮುಂತಾದ ಸೌಕರ್ಯ ಒಳಗೊಂಡ ಒಂದು ಸಂಪೂರ್ಣ ಚೌಕಟ್ಟು

ಕರ್ನಾಟಕ ಜಾಲತಾಣದ ಮೂಲಕ

ಇಲಾಖೆ ಜಾಲತಾಣ ಸೃಜನಾ ವಿಧಾನ

 • 01

  ಜಾಲತಾಣ ರಚನೆಗೆ ಮನವಿ

  ಇಲಾಖೆಯಿಂದ ಜಾಲತಾಣ ರಚನೆಗೆ ಮನವಿ

 • 02

  ನಾಮನಿರ್ದೇಶನ

  ಇಲಾಖೆಯಿಂದ ಕಂಟೇಂಟ್‌ ಕ್ರಿಯೇಟರ್, ಕಂಟೇಂಟ್‌ ಮಾಡರೇಟರ್, ಕಂಟೇಂಟ್‌ ಅಪ್ರೂವರ್ ಗುರುತಿಸುವುದು

 • 03

  ತರಬೇತಿ ಮತ್ತು ಆಕ್ಸೆಸ್ ನೀಡಿಕೆ

  ಇಲಾಖೆ ಸಿಬ್ಬಂದಿಗೆ ತರಬೇತಿ ನೀಡುವುದು ಮತ್ತು ಮಾಹಿತಿ ಅಳವಡಿಸಲು (ಅಪ್ಲೋಡ್) ಆಕ್ಸೆಸ್ ನೀಡುವುದು.

 • 04

  ಇನ್‌ಸ್ಟನ್ಸ್‌ ರಚನೆ

  ಇಲಾಖೆಗಳು ಸೂಚಿಸಿದ ಡೊಮೇನ್‌ ಆಧಾರದ ಮೇಲೆ ಇನ್‌ಸ್ಟನ್ಸ್‌ ರಚಿಸುವುದು

 • 05

  ಜಾಲತಾಣಕ್ಕೆ ಮಾಹಿತಿ ಸೇರಿಸುವುದು

  ಸಿಬ್ಬಂದಿಗೆ ನೀಡಿದ ಆಕ್ಸೆಸ್( ಇಮೇಲ್‌ ಮತ್ತು ಪಾಸ್‌ವರ್ಡ್‌) ನಿಂದ ಜಾಲತಾಣಕ್ಕೆ ಮಾಹಿತಿ ಸೇರಿಸುವುದು

 • 06

  ಜಾಲತಾಣ ಪ್ರಕಟಣೆ

  ಇ-ಆಡಳಿತ ಕೇಂದ್ರದಿಂದ ಇಲಾಖೆ ಸಿದ್ದಪಡಿಸಿದ ಜಾಲತಾಣದ ಪರೀಕ್ಷೆ ಮತ್ತು ಎಸ್. ಎಸ್. ಎಲ್. ಪ್ರಮಾಣ ಪತ್ರ ನೀಡಿ ಕರ್ನಾಟಕ ಡೇಟಾ ಸೆಂಟರ್ ನಲ್ಲಿ ಹೋಸ್ಟ್ ಮಾಡುವುದು

ಇಲಾಖೆ ವಿನ್ಯಾಸ